ಡಿವಿಜಿ ಸುದ್ದಿ.ಕಾ, ದಾವಣಗೆರೆ : ಕಾಂಗ್ರೆಸ್ ಪಕ್ಷ ನೆರೆ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ಬೇಡ. ಸಮಾಜ ಒಡೆಯುವ ಕೆಲಸ ಮಾಡಿದ್ರೂ ಅದು ಸಾಧ್ಯವಾಗಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ತಿಣುಕಾಡಿ ಒಂದು ಸ್ಥಾನ ಗೆದ್ರು. ಈಗ ನೆರೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡ್ತಿದೆ ಎಂದು ವ್ಯಂಗ್ಯವಾಡಿದ್ರು.
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಂತರ ಮಾತನಾಡಿದ ಅವರು, ನೆರೆ ಪರಿಹಾರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ ಎಂದ್ರು.
ಸಿದ್ದರಾಮಯ್ಯರಿಗೆ ಎಲ್ಲಾ ಸಾಮರ್ಥ್ಯ ದೇವರು ಕೊಟ್ಟಿದ್ದಾನೆ.ಅವರು 10 ಗ್ರಾಮ ದತ್ತು ತೆಗದುಕೊಳ್ಳಿ, ಬಿಜೆಪಿ 15 ತೆಗೆದುಕೊಳ್ಳುತ್ತೆ, ಜೆಡಿಎಸ್ ಸುಮ್ಮನಿರದೆ 5 ಗ್ರಾಮ ದತ್ತು ತೆಗೆದುಕೊಳ್ಳುತ್ತೆ ಎಂದು ತಿಳಿಸಿದರು.
ರಾಜಕೀಯ ಎಂಬುದು ಸೋಡ ಗ್ಯಾಸ್ ಇದ್ದಂಗೆ ಅದು ಟುಸ್ ಎಂದು ಸುಮ್ಮನಾಗುತ್ತೆ. ಜಿ.ಟಿ. ದೇವೇಗೌಡ ಬಿಜೆಪಿ ಸೇರುವ ಬಗ್ಗೆ ಅಸ್ಪೃಶತೆ ಇಲ್ಲ. ಜಿಟಿಡಿ, ಸಿದ್ದರಾಮಯ್ಯ, ಕುಮಾರಸ್ವಾಮಿ, ಯಾರು ಬೇಕಾದರೂ ಪಕ್ಷದ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರಹುದು ಎಂದ್ರು.
ಹದ್ದಾಗಿ ಕುಕ್ಕಿತಲ್ಲೋ ಎಂದು ಮಾರ್ಮಿಕವಾಗಿ ಯಾರು ಹದ್ದು ಎಂದು ಹೇಳಿದ್ದಾರೆ.ಅವರು ಪರಸ್ಪರ ಕುಕ್ಕಿಸಿಕೊಳ್ಳಲಿ ನಾವು ನಮ್ಮ ಕೆಲಸ ನಾವು ಮಾಡುತ್ತೇವೆ.ಟಿಕೆಟ್ ಯಾರಿಗೆ ಎಂದು ಪಾರ್ಲಿಮೆಂಟರಿ ಬೋರ್ಡ್ ನಿರ್ಧರಿಸುತ್ತೆ.ನಮ್ಮ ಸರ್ಕಾರ ಬರಲು ರಾಜೀನಾಮೆ ಕೊಟ್ಟ ಶಾಸಕರು ಪ್ರತ್ಯಕ್ಷ ಪರೋಕ್ಷವಾಗಿ ಕಾರಣರಾಗಿದ್ದಾರೆ..ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದ್ರು.



