ಬೀಜಿಂಗ್: ಭಾರತದಲ್ಲಿ ಟಿಕ್‌ಟಾಕ್, ಹೆಲೋ ಆ್ಯಪ್ ನಿಷೇಧದಿಂದ ಚೀನಾದ ಬೈಟ್‌ಡ್ಯಾನ್ಸ್ ಕಂಪನಿಗೆ 45000 ಕೋಟಿ ವರೆಗೆ ನಷ್ಟವಾಗುವ ಸಾಧ್ಯತೆ ಇದೆ.
ಈ ಕಂಪನಿಯು ಭಾರತದಲ್ಲಿ 7 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ. ಚೀನಾ-ಭಾರತ ಗಡಿ ಸಂಘರ್ಷದ ನಂತರ ಕೇಂದ್ರ ಸರ್ಕಾರ 59 ಆ್ಯಪ್‌ಗಳ ನಿಷೇಧ ಮಾಡಿದೆ. ಅದರಲ್ಲಿ ಟಿಕ್ ಟಾಕ್ ಮತ್ತು ಹಲೋ ಸೇರಿವೆ. ನಿಷೇಧದಿಂದ ವಹಿವಾಟು ಸ್ಥಗೊಂಡಿದೆ. 45000 ಕೋಟಿ ನಷ್ಟವಾಗುವ ಸಾಧ್ಯತೆ ಎಂದು ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಿದೆ.
ಟಿಕ್‌ಟಾಕ್ ವಿಡಿಯೊ ಶೇರಿಂಗ್ , ಹೆಲೋ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿದ್ದವು. ಇನ್ನು ಮತ್ತೊಂದು ವಿಗೊ ವಿಡಿಯೊ ಸಹ ನಿಷೇಧವಾಗಿದೆ. ಇದು ಸಹ ಬೈಟ್‌ಡ್ಯಾನ್ಸ್ ಕಂಪನಿಯದ್ದಾಗಿದೆ.
59 ಆ್ಯಪ್‌ಗಳನ್ನು ಬ್ಲಾಕ್ ಮಾಡುವಂತೆ ಸ್ಥಳೀಯ ದೂರಸಂಪರ್ಕ ಆಪರೇಟರ್‌ಗಳಿಗೆ ಸೂಚಿಸಿದೆ. ಟಿಕ್‌ಟಾಕ್ ಮತ್ತು ಹೆಲೋ ಈಗಾಗಲೇ ಸಿಗುತ್ತಿಲ್ಲ. ಈ ಹಿಂದೆ ಡೌನ್‌ಲೋಡ್ ಮಾಡಿರುವವರ ಮೊಬೈಲ್‌ಗಳಲ್ಲೂ ಕಾರ್ಯನಿರ್ವಹಿಸುತ್ತಿಲ್ಲ.



