ನವದೆಹಲಿ: ದೇಶದಾದ್ಯಂತ ಒಂದೇ ದಿನದಲ್ಲಿ 19,148 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 434 ಜನರು ಮೃತಪಟ್ಟಿದ್ದಾರೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ದೇಶದಲ್ಲಿ ಒಟ್ಟು 6,04,641 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ17,834ಕ್ಕೆ ಏರಿಕೆಯಾಗಿದೆ. ಸದ್ಯ 2,26,947 ಪ್ರಕರಣಗಳು ಸಕ್ರಿಯವಾಗಿದ್ದು, 3,59,860 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಹಾರಾಷ್ಟ್ರ ಒಂದರಲ್ಲಿಯೇ 1,80,298 ಪ್ರಕರಣಗಳು ಬೆಳಕಿಗೆ ಬಂದಿದ್ದು, 8,053 ಜನರು ಮೃತರಾಗಿದ್ದಾರೆ.ಗುಜರಾತ್‌ನಲ್ಲಿ 33,232 ಜನರಿಗೆ ಸೋಂಕಿತರಿದ್ದು,1,867 ಜನರು ಮೃತಪಟ್ಟಿದ್ದಾರೆ. ದೆಹಲಿಯಲ್ಲಿ 89,802 ಮಂದಿಗೆ ಸೋಂಕು ತಗುಲಿದ್ದು, 2,803 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 94,049 ಮಂದಿಗೆ ಸೋಂಕು ತಗುಲಿದ್ದು, 1,264 ಮಂದಿ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದಲ್ಲಿ 581, ಪಶ್ಚಿಮ ಬಂಗಾಳದಲ್ಲಿ 683, ಉತ್ತರ ಪ್ರದೇಶದಲ್ಲಿ 718 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
#CoronaVirusUpdates: #COVID19 India Tracker
(As on 2 July, 2020, 08:00 AM)▶️ Confirmed cases: 604,641
▶️ Active cases: 226,947
▶️ Cured/Discharged/Migrated: 359,860
▶️ Deaths: 17,834#IndiaFightsCorona#StayHome #StaySafe @ICMRDELHIVia @MoHFW_INDIA pic.twitter.com/OpS45TQpSy
— #IndiaFightsCorona (@COVIDNewsByMIB) July 2, 2020



