Connect with us

Dvgsuddi Kannada | online news portal | Kannada news online

ಶ್ರೀರಾಮುಲು ಡಿಸಿಎಂ ಪಟ್ಟಕ್ಕೆ ಆಗ್ರಹಿಸಿ ಪ್ರತಿಭಟನೆ

ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆ ಕೂಗುತ್ತಿರುವ ಶ್ರೀರಾಮುಲು ಅಭಿಮಾನಿಗಳು

Home

ಶ್ರೀರಾಮುಲು ಡಿಸಿಎಂ ಪಟ್ಟಕ್ಕೆ ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ: ವಾಲ್ಮೀಕಿ ಸಮುದಾಯದ ಬಿ.ಶ್ರೀರಾಮುಲು ಅವರಿಗೆ ಡಿಸಿಎಂ ಪಟ್ಟ ನೀಡಬೇಕೆಂದು ಆಗ್ರಹಿಸಿ ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ಜಯದೇವ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯ ವಿವಿಧ ಭಾಗದಿಂದ ಜಮಾಯಿಸಿದ ಶ್ರೀರಾಮುಲು ಅಭಿಮಾನಿಗಳು, ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿದ್ರು. ನಾಯಕ ಸಮುದಾಯದ ಶ್ರೀರಾಮುಲು ಅವರನ್ನು ಚುನಾವಣೆ ಸಂದರ್ಭದಲ್ಲಿ ರಾಜ್ಯದ 80 ಕ್ಷೇತ್ರದಲ್ಲಿ ಬಳಸಿಕೊಂಡ ಬಿಜೆಪಿ, ಇದೀಗ ಡಿಸಿಎಂ ಸ್ಥಾನ ನೀಡದಿರುವುದು ಸರಿಯಲ್ಲ. ಬಿಜೆಪಿ ಸರ್ಕಾರದಲ್ಲಿ ವಾಲ್ಮೀಕಿ ಸಮುದಾಯದ ನಾಯಕನನ್ನು ತುಳಿಯಲಾಗುತ್ತಿದೆ.

davanagere protest_dvgsuddi

ದಾವಣಗೆರೆಯ ಜಯದೇವ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಶ್ರೀರಾಮುಲು ಅಭಿಮಾನಿಗಳು

ಕಳೆದ ವಿಧಾನಸಭೆ ಚುನಾವಣೆ ವೇಳೆ 9 ಕ್ಷೇತ್ರದಲ್ಲಿ ತನ್ನದೇ ವರ್ಚಸ್ಸು ಹೊಂದಿರುವ ಶ್ರೀರಾಮುಲು ವಾಲ್ಮೀಕಿ ಸಮುದಾಯದ ಶೇ. 80 ರಷ್ಟು ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ರು. ಇಂತಹ ನಾಯಕನಿಗೆ ಡಿಸಿಎಂ ಹುದ್ದೆ ನೀಡದಿರುವುದು ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಈ ಕೂಡಲೇ ಬಿಜೆಪಿ ಹೈಕಮಾಂಡ್ ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅವರಗೆರೆ ಗೋಶಾಲೆ ಸುರೇಶ್ ಎಚ್ವರಿಸಿದ್ರು. ಈ ಸಂದರ್ಭದಲ್ಲಿ ಪರಶುರಾಮ್ ಹೊಸಹಳ್ಳಿ, ಪ್ರವೀಣ್ ಬಿಜಲಿ, ಎನ್.ಎಸ್. ರಾಜೇಶ್, ಶಶಿ ದಾವಣಗೆರೆ, ಅಜಯ್ ಸಾರಥಿ ಸೇರಿದಂತೆ ಇನ್ನು ಮುಂತಾದವರು ಭಾಗಿಯಾಗಿದ್ರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in Home

  • Home

    ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024

    By

    ಈ ರಾಶಿಯವರು ಸಿಹಿ ಸಂದೇಶಗಳ ಮೇಲೆ ಸಿಹಿ ಸಂದೇಶ ಪಡೆಯಲಿದ್ದೀರಿ, ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024 ಸೂರ್ಯೋದಯ: 06:29, ಸೂರ್ಯಾಸ್ತ :...

  • Home

    ಗುರುವಾರ- ರಾಶಿ ಭವಿಷ್ಯ ಜನವರಿ-4,2024

    By

    ಈ ರಾಶಿಗಳ ಕಿರುತೆರೆಯ ನಟ-ನಟಿಯರಿಗೆ, ಹಿನ್ನೆಲೆ ಗಾಯಕರಿಗೆ, ಸಂಗೀತಗಾರರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಬೆಳ್ಳಿತೆರೆಯಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ. ಗುರುವಾರ- ರಾಶಿ ಭವಿಷ್ಯ...

  • Home

    ಮರದ ಬಾಗಿಣ ವಿಶೇಷತೆ..!

    By

    ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು. ಸೋಮಶೇಖರ ಗುರೂಜಿB.Sc ಜ್ಯೋತಿಷ್ಯರು, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.MOB.93534 88403 ೧....

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-29,2023

    By

    ಈ ರಾಶಿಯವರಿಗೆ ಬಂಧುಗಳ ಅವಹೇಳನ ಮಾತುಗಳಿಂದ ಪ್ರಗತಿಗೆ ದಾರಿದೀಪ, ಈ ರಾಶಿಯವರಿಗೆ ಒತ್ತಡದ ಮೇರೆಗೆ ಹಣ ಸ್ವೀಕಾರ, ಈ ರಾಶಿಯವರು ಚಿನ್ನಾಭರಣ...

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-22,2023

    By

    ಈ ಪಂಚ ರಾಶಿಗಳ ತುಳಸಿ ಪೂಜೆ ನಂತರ ವಿವಾಹ ಕಾರ್ಯ ನೆರವೇರುವುದು, ರಿಯಲ್ ಎಸ್ಟೇಟ್ ಉದ್ಯಮದಾರರು ಬಹು ಮುಖ್ಯವಾದ ಪ್ರಾಜೆಕ್ಟ್ ಗೆ...

To Top