ದಾವಣಗೆರೆ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಶಿಷ್ಯವೇತನ ಹಾಗೂ ಸಣ್ಣ ಉದ್ಯೋಗಿಗಳಿಗೆ ಸ್ವಾವಲಂಬಿ ಸಾಲ-ಸೌಲಭ್ಯ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಇಡಬ್ಲ್ಯೂಎಸ್ ಪ್ರಮಾಣಪತ್ರ ಹೊಂದಿರುವ ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕಚೇರಿಯನ್ನು 08029605888 ನಂಬರ್‌ನಲ್ಲಿ ಸಂಪರ್ಕಿಸಬಹುದು. ಶಿಷ್ಯವೇತನ ಅರ್ಜಿಯನ್ನು https://ssp.karnataka.gov.in ಮೂಲಕ ಸಲ್ಲಿಸಬಹುದು. ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ಸಣ್ಣ ಉದ್ದಿಮೆದಾರರು ಸ್ವಾವಲಂಬಿ ಯೋಜನೆಯಡಿ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅಖಿಲ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಸಿ.ಕೆ. ಆನಂದತೀರ್ಥಾಚಾರ್ ತಿಳಿಸಿದ್ದಾರೆ.