Connect with us

Dvg Suddi-Kannada News

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು; ಗ್ರೆಡೇಷನ್ ಆಧಾರದ ಮೇಲೆ ಅಂಕ: ಸಚಿವ ಸುರೇಶ್ ಕುಮಾರ್

ಪ್ರಮುಖ ಸುದ್ದಿ

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು; ಗ್ರೆಡೇಷನ್ ಆಧಾರದ ಮೇಲೆ ಅಂಕ: ಸಚಿವ ಸುರೇಶ್ ಕುಮಾರ್

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ  ರದ್ದುಗೊಳಿಸಲಾಗಿದ್ದು,  ಪ್ರಥಮ ಪಿಯುಸಿಯಲ್ಲಿ ತೆಗೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಗ್ರೆಡೇಷನ್‌ ನೀಡಲಾಗುವುದು ಎಂದು ಸಚಿವ  ಎಸ್. ಸುರೇಶ್‌ ಕುಮಾರ್‌ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನೆಸದಿರುವ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಇಲ್ಲದೆನೇ ಯಾವ ರೀತಿ ಗ್ರೇಡಿಂಗ್‌ ಕೊಡಬಹುದು, ಯಾವ ರೀತಿಯಲ್ಲಿ ಅವರ ಕಲಿಕಾ ಮಟ್ಟವನ್ನು ಅಳೆಯಬಹುದು ಎಂಬ ಬಗ್ಗೆ ಯೋಚನೆ ಮಾಡಿದ್ದೇವೆ. ರದ್ದು ಮಾಡಿದ ರಾಜ್ಯಗಳನ್ನು ಸಂಪರ್ಕ ಮಾಡಿ ರಿಸಲ್ಟ್‌ ಹೇಗೆ ಮಾಡುತ್ತೀರಿ ಎಂದು ಕೇಳಿದ್ದೇವೆ. ನಮ್ಮ ರಾಜ್ಯದಲ್ಲಿ ಸೂಕ್ತವಾದ ನಿರ್ಧಾರ ತೆಗೆದುಕೊಂಡ ಮೇಲಷ್ಟೇ ಈ ಕ್ರಮ ತೆಗೆದುಕೊಳ್ಳಲಾಗಿದೆ. ಹೀಗಾಗಿ ಈ ಬಾರಿ  ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವುದಿಲ್ಲ.

ಈ ಗ್ರೇಡೇಷನ್‌ ಸಮಾಧಾನ ಇಲ್ಲದ ಮಕ್ಕಳು ಬೇಸರ ವ್ಯಕ್ತಪಡಿಸುವ ಅಗತ್ಯವಿಲ್ಲ. ಏಕೆಂದರೆ ಕೋವಿಡ್‌ ಮುಗಿದ ಮೇಲೆ ಇಂಥ ಮಕ್ಕಳಿಗೆ ಪರೀಕ್ಷೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತೇವೆ. ಈಗ ದ್ವಿತೀಯ ಪಿಯುಸಿ ಮಕ್ಕಳು ಪ್ರಮೋಟೆಡ್‌ ಎಂದು ಮಾಡಿದ್ದೇವೆ. ಬೇರೆ ಬೇರೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡವರು ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ.

ನಮ್ಮ ಬಳಿ ಎಲ್ಲಾ ಕಾಲೇಜುಗಳ ಪ್ರಥಮ ಪಿಯುಸಿಯ ಫಲಿತಾಂಶ ಇದ್ದು, ಅದರ ಆಧಾರದ ಮೇಲೆ ಗ್ರೇಡೇಷನ್‌ ಮಾಡುತ್ತೇವೆ. ಕಳೆದ ವರ್ಷ ರಾಜ್ಯಮಟ್ಟದಲ್ಲಿ ಪ್ರಥಮ ಪಿಯು ಪರೀಕ್ಷೆ ಆಯೋಜನೆ ಮಾಡಿದ್ದು, ಅಲ್ಲಿ ಪಾಸಾದ ಎಲ್ಲ ವಿದ್ಯಾರ್ಥಿಗಳು ದ್ವಿತೀಯ ಪಿಯುನಲ್ಲೂ ಪಾಸ್ ಆಗಲಿದ್ದಾರೆ ಎಂದು ಸಚಿವರು ತಿಳಿಸಿದರು.

 

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top