Connect with us

Dvg Suddi-Kannada News

ದಾವಣಗೆರೆ: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ದಾವಣಗೆರೆ

ದಾವಣಗೆರೆ: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ದಾವಣಗೆರೆ:  ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಅಶೋಕ ಥಿಯೇಟರ್ ಹಿಂಭಾಗದ ಬಿಟಿ ಪೆಟ್ರೋಲ್  ಬಂಕ್ ಎದುರು ಪ್ರತಿಭಟನೆ ನಡೆಸಿದರು.

100 ನಾಟ್ ಔಟ್ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ಸಂಕಷ್ಟದಲ್ಲಿ ಆಂಬುಲೆನ್ಸ್ ಗಳಿಗೂ ಡಿಸೇಲ್ ಹಾಕದ ಸ್ಥಿತಿ ಇದೆ. ಕೋವಿಡ್ ಸೋಂಕಿತರನ್ನು ಕೈಗಾಡಿಯಲ್ಲಿ  ಆಸ್ಪತ್ರೆಗೆ ಒಯ್ಯುವ ಅಣಕು ಕಾರ್ಯಾಚರಣೆ ನಡೆಸಿದರು. ಈ ವೇಳೆ ಬೈಕ್ ಎಕ್ಸ್ ಚೇಂಜ್   ಮೇಳ ಆಯೋಜಿಸಿ,  ಬೈಕ್ ಬದಲಾಗಿ ಸೈಕಲ್ ಗಳನ್ನು ನೀಡಲಾಯಿತು.

ಪ್ರತಿಭಟನೆಯಲ್ಲಿ ಕಾಂಗ್ರೆಸ್  ವಕ್ತಾರ ಮೈನುದ್ದೀನ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಾಗರ್.ಎಲ್.ಹೆಚ್,  ರಾಜ್ಯ ಯುವ ಕಾಂಗ್ರೆಸ್ ನ  ಸಂದೀಪ್ ಅಣಬೇರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಸಾಧಿಕ್ ಸದ್ದಾಮ್, ಮೊಹಮ್ಮದ್ ವಾಜಿದ್, ದಾವಣಗೆರೆ ದಕ್ಷಿಣ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಸೈಯದ್ ಇರ್ಫಾನ್, ಉತ್ತರ ಯುವ ಕಾಂಗ್ರೆಸ್ ಉಪಾಧ್ಯಕ್ಷರು ರಾಕೇಶ್.ಡಿ.ಸಿ.ಎಮ್. ಹಬಿಬಾ, ಕಾರ್ಯದರ್ಶಿ ಖಾಜಾ,ಸಮೀರ್, ಮಹಮ್ಮದ್ ಆರೀಫ್, ನವೀನ್, ಮುಬಾರಕ್ ಅನೇಕ ಯುವ ಕಾಂಗ್ರೆಸ್  ಕಾರ್ಯಕರ್ತರು ಭಾಗಿಯಾಗಿದ್ದರು

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top