Connect with us

Dvg Suddi-Kannada News

ಕೊರೊನಾ ಲಸಿಕೆ ಹಂಚಿಕೆಯಲ್ಲಿ ಸರ್ಕಾರ ವಿಫಲ; ಉಚಿತ ಲಸಿಕೆ ನೀಡಿದ ಶಾಮನೂರು ಶಿವಶಂರಪ್ಪ ರಾಜಕಾರಣಿಗಳಿಗೆ ಮಾದರಿ: ಡಿ.ಕೆ. ಶಿವಕುಮಾರ್

ಪ್ರಮುಖ ಸುದ್ದಿ

ಕೊರೊನಾ ಲಸಿಕೆ ಹಂಚಿಕೆಯಲ್ಲಿ ಸರ್ಕಾರ ವಿಫಲ; ಉಚಿತ ಲಸಿಕೆ ನೀಡಿದ ಶಾಮನೂರು ಶಿವಶಂರಪ್ಪ ರಾಜಕಾರಣಿಗಳಿಗೆ ಮಾದರಿ: ಡಿ.ಕೆ. ಶಿವಕುಮಾರ್

ದಾವಣಗೆರೆ: ಕೊರೊನಾ ಲಸಿಕೆ ಹಂಚಿಕೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ‌. ಆದರೆ, ಸ್ವಂತ ಖರ್ಚಿನಲ್ಲಿ ಉಚಿತ ನೀಡುತ್ತಿರುವ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂರಪ್ಪ ಅವರ ಕಾರ್ಯ ದೇಶದ ರಾಜಕಾರಣಿಗಳಿಗೆ ಮಾದರಿ ಮತ್ತು ದೊಡ್ಡ ಸಂದೇಶ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ಜನರಿಗೆ ಉಚಿತ ಲಸಿಕೆ ನೀಡುತ್ತಿರುವುದು ದೇಶದ ರಾಜಕಾರಣಿಗಳಿಗೆ ದೊಡ್ಡ ಸಂದೇಶ. ಜೀವ ಉಳಿಸಿ ಎಂದು ಭಿಕ್ಷೆ ಬೇಡುತ್ತಿದ್ದೇವೆ. 100 ಕೋಟಿ ರೂ. ಇಟ್ಟುಕೊಂಡು ಲಸಿಕೆಗಾಗಿ ಸರ್ಕಾರಕ್ಕೆ ಪರ್ಮಿಶನ್ ಕೇಳಿದ್ದೆವು, ಅವರು ಕೊಡಲಿಲ್ಲ. ಇದೀಗ 1 ಲಕ್ಷ ಜನಕ್ಕೆ ಉಚಿತವಾಗಿ ಶಾಮನೂರು ಕುಟುಂಬ ಲಸಿಕೆ ನೀಡಲು ಮುಂದಾಗಿದೆ. ನಮ್ಮ ಪಕ್ಷದ ಪರವಾಗಿ, ಸಂಸ್ಥೆ ಪರವಾಗಿ ಚಾಲನೆ ನೀಡಲಾಗುತ್ತಿದೆ ಎಂದರು.

ಲಸಿಕೆ ಹಂಚಿಕೆ ವಿರುದ್ಧ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ‌. ಸಿಎಂ ಲಸಿಕೆ ಉದ್ಘಾಟನೆ ನಂತರ ನಮ್ಮ ಹುಡುಗರು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರೂ ಕೂಡ ಆನ್​​​ಲೈನ್ ರಿಜಿಸ್ಟ್ರೇಶನ್ ಇಲ್ಲ. ಇದು ಯಡಿಯೂರಪ್ಪ ಸೇರಿದಂತೆ ಕೇಂದ್ರ ಸರ್ಕಾರದ ವೈಫಲ್ಯವಾಗಿದೆ. ನಾನು ಸತ್ತರೂ ಚಿಂತೆಯಿಲ್ಲ, ಜನರಿಗೋಸ್ಕರ ಏನು ಮಾಡುವುದಕ್ಕೂ ಸಿದ್ಧ ಎಂದರು.

ಇನ್ನೂ ಮೈಸೂರಿ ಜಿಲ್ಲಾಧಿಕಾರಿ ಮತ್ತು ಆಯುಕ್ತರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಯಥಾ ರಾಜಾ ತಥಾ ಅಧಿಕಾರಿ ಎನ್ನುವಂತಾಗಿದೆ. ಶಾಸಕರು, ಸಚಿವರು ಏನು ಮಾಡುತ್ತಿದ್ದಾರೆ? ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೋ ಮಂತ್ರಿ ಸ್ವಾಮಿಗಳಿಗೆ ಸಿಡಿ ತೋರಿಸಲು ಮಠಕ್ಕೆ ಹೋಗಿದ್ದನಂತೆ. ಆ ಮಠದ ಸ್ವಾಮೀಜಿಗಳು ಮಂತ್ರಿಯನ್ನು ಬೈದು ಕಳುಹಿಸಿದ್ದರು. ಯತ್ನಾಳ್ ಹೇಳಿದ್ದಾರಲ್ಲ ಅದೇ ಸಿಡಿ ಇದು ಎಂದು ಹೇಳಿದರು.

 

 

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top