Connect with us

Dvg Suddi-Kannada News

ಮರಳು ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರ ವಿರುದ್ಧ ರೇಣುಕಾಚಾರ್ಯ ಕಿಡಿ; ಎರಡು ದಿನ ದಾಳಿ ಮಾಡಿದ್ರೆ ಹೀರೋ ಆಗ್ಬಿಡ್ತಾರೇನ್ರೀ..?

ಪ್ರಮುಖ ಸುದ್ದಿ

ಮರಳು ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರ ವಿರುದ್ಧ ರೇಣುಕಾಚಾರ್ಯ ಕಿಡಿ; ಎರಡು ದಿನ ದಾಳಿ ಮಾಡಿದ್ರೆ ಹೀರೋ ಆಗ್ಬಿಡ್ತಾರೇನ್ರೀ..?

ದಾವಣಗೆರೆ: ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಕ್ಕೆ ಶಾಸಕ ರೇಣುಕಾಚಾರ್ಯ ಗರಂ ಆಗಿದ್ದು, ಎರಡು ದಿನ ದಾಳಿ ಮಾಡಿದ್ರೆ ಹೀರೋ ಆಗ್ಬಿಡ್ತಾರೇನ್ರೀ..? ಎಂದು ನೂತನ ಎಸ್ಪಿ ರಿಷ್ಯಂತ್ ವಿರುದ್ಧ ಕಿಡಿಕಾರಿದ್ದಾರೆ.

ನಾನು ಯಾವಾಗಲೂ ಬಡವರ ಪರ, ಶ್ರೀಮಂತರ ಪರ ಅಲ್ಲ. ಬೈಕ್ ಹಾಗೂ ಎತ್ತಿನ ಗಾಡಿಗಳಲ್ಲಿ ಮರಳು ಸಾಗಾಟ ಮಾಡಿ. ಯಾರು ಬರುತ್ತರೋ ಬರಲಿ, ನಿಮ್ಮ ಜೊತೆ ನಾನಿರುತ್ತೇನೆ. ಬಂದ ಎರಡು ದಿನಗಳಲ್ಲೇ ದಾಳಿ ಮಾಡಿಬಿಟ್ಟರೆ ಎಸ್ಪಿ ಹೀರೋ ಆಗ್ಬಿಡ್ತಾರೇನ್ರೀ ಎಂದಿದ್ದಾರೆ. ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ತಂಗಿರುವ ರೇಣುಕಾಚಾರ್ಯರನ್ನು ಭೇಟಿ ಮಾಡಿದ ಗ್ರಾಮಸ್ಥರು, ಮರಳು ತೆಗೆದುಕೊಂಡು ಹೋದರೆ ಕೇಸ್ ಹಾಕುತ್ತಿದ್ದಾರೆ ಎಂದು ದೂರು ಸಲ್ಲಿಸಿದರು‌. ಈ ಸಂದರ್ಭದಲ್ಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜೂಜಾಟ, ಓಸಿ, ಕಳ್ಳತನ ಸೇರಿದಂತೆ ಅಕ್ರಮ ಹಾಗೂ ಕಾನೂನು ವಿರೋಧಿ ಚಟುವಟಿಕೆಗಳಿಗೆ ಮಟ್ಟ ಹಾಕಲಿ
ಬೈಕ್ ಹಾಗೂ ಎತ್ತಿನ ಗಾಡಿಗಳಲ್ಲಿ ಮರಳು ಸಾಗಾಟ ಮಾಡಲು ನಾವೇ ಅನುಮತಿ ನೀಡಿದ್ದೇವೆ. ಅವರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ. ಅಧಿಕಾರಿಗಳು ಕಚೇರಿ ಹಾಗೂ ಮನೆಯಲ್ಲಿ ಎಸಿಯಲ್ಲೇ ಇರುತ್ತಾರೆ. ಗ್ರಾಮೀಣ ಭಾಗದ ಜನರು ತಮ್ಮ ಮನೆ ಕಟ್ಟಿಕೊಳ್ಳಲು ಹಾಗೂ ದೇವಸ್ಥಾನಕ್ಕೆ ಮರಳು ಕೊಂಡೊಯ್ದರೆ ತಪ್ಪೇನು. ಯಾವುದಕ್ಕೂ ಹೆದರಬೇಡಿ, ಮರಳು ತೆಗೆದುಕೊಂಡು ಹೋಗಿ, ಏನಾಗುತ್ತೋ ನೋಡೋಣ.ಕಳ್ಳರು, ಅತ್ಯಾಚಾರಿಗಳು, ಇಸ್ಪೀಟ್ ಆಡುವವರ ಪರವಾಗಿ ನಾನೆಂದೂ ನಿಲ್ಲಲ್ಲ. ಕಾನೂನು ವಿರೋಧಿ ಚಟುವಟಿಕೆ‌ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ‌ಕೈಗೊಳ್ಳಲಿ ಎಂದರು.

ಮನೆ ಕಟ್ಟಿಕೊಳ್ಳಲು ಹಾಗೂ ದೇವಸ್ಥಾನದ ಕೆಲಸಗಳಿಗೆ ಮರಳು ತೆಗೆದುಕೊಂಡು ಹೋದರೆ ತಪ್ಪೇನಿದೆ. ಎಸ್ಪಿ ಬರಲಿ ನೋಡಿಕೊಳ್ಳುತ್ತೇನೆ. ಬಡವರು ಬೈಕ್ ಹಾಗೂ ಎತ್ತಿನಗಾಡಿಗಳಲ್ಲಿ ಮರಳು ತೆಗೆದುಕೊಂಡು ಹೋಗಿ. ಯಾರಾದರೂ ಬಂದು ಅಡ್ಡಿಪಡಿಸಿದರೆ ನಾನು ಬಂದು ಮರಳು ತುಂಬುತ್ತೇನೆ ಎಂದರು.

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top