ದಾವಣಗೆರೆ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಿಂದ ಮೊಬೈಲ್ ರಿಪೇರಿ ತರಬೇತಿ

ದಾವಣಗೆರೆ: ತೋಳಹುಣಸೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಮಟ್ಟದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಮೊಬೈಲ್ ರಿಪೇರಿ ತರಬೇತಿಗೆ ಅ.19ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ. ಅ. 30 ರಿಂದ 30 ದಿನಗಳ ನಡೆಯುವ ಈ ಉಚಿತ ತರಬೇತಿಗೆ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಳ್ಳಬಹುದು. ವಿವರಕ್ಕೆ ಸಂಪರ್ಕಿಸಿ : 7975139332, 7019980484, 9964111314, 9538395817, 9481977076.‌