Connect with us

Dvg Suddi-Kannada News

ದಾವಣಗೆರೆ: ಇವತ್ತಿನಿಂದ ಮಧ್ಯಾಹ್ನ 2 ಗಂಟೆ ಬದಲು, 1 ಗಂಟೆ ವರೆಗೆ ಮಾತ್ರ ಎಲ್ಲಾ ಅಂಗಡಿ ತೆರೆಯಲು ಅವಕಾಶ

ದಾವಣಗೆರೆ

ದಾವಣಗೆರೆ: ಇವತ್ತಿನಿಂದ ಮಧ್ಯಾಹ್ನ 2 ಗಂಟೆ ಬದಲು, 1 ಗಂಟೆ ವರೆಗೆ ಮಾತ್ರ ಎಲ್ಲಾ ಅಂಗಡಿ ತೆರೆಯಲು ಅವಕಾಶ

ದಾವಣಗೆರೆ:‌ ಜಿಲ್ಲೆಯಲ್ಲಿ ಸರ್ಕಾರ ಅನ್ ಲಾಕ್ ಮಾಡಿದ್ದರೂ, ಮಧ್ಯಾಹ್ನ 1ಗಂಟೆ ವರೆಗೆ ಮಾತ್ರ ಎಲ್ಲಾ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಈ ಹಿಂದೆ ಇದ್ದ 2 ಗಂಟೆ ವರೆಗಿನ ಅವಕಾಶ ಬದಲಿಗೆ ಸರ್ಕಾರದ ನಿರ್ದೇಶನದಂತೆ ಎಲ್ಲಾ ವ್ಯಾಪಾರ ಚಟುವಟಿಕೆ ನಡೆಸಲು ನೀಡಿದ್ದ ಅವಧಿಯಲ್ಲಿ ಒಂದು ಗಂಟೆ ಮೊಟಕುಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಶೇ.5 ಕ್ಕಿಂತ ಹೆಚ್ಚು ಸೋಂಕಿತ ಪ್ರಮಾಣ ಇದ್ದ ಕಾರಣ, ನಿರ್ಬಂಧಿತ ಲಾಕ್ಡೌನ್ ವಿಧಿಸಿದ್ದ ಸರ್ಕಾರ ಕಳೆದ ಜೂ.21 ರಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ‌ ಮಾತ್ರ ಅಂಗಡಿಗಳನ್ನು ತೆರೆದು ವ್ಯಾಪಾರ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಿತ್ತು. ಈಗ ಸೋಂಕಿತ ಪ್ರಮಾಣದ ಪರಿಶೀಲಿಸಿ ವ್ಯಾಪಾರ ಚಟುವಟಿಕೆಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ ‌1 ರವರೆಗೆ ಮಾತ್ರ ಅವಕಾಶ ನೀಡಿದ ಕಾರಣ ಒಂದು ತಾಸು ಕಡಿತಗೊಳಿಸಲಾಗಿದೆ. ಹವಾ ನಿಯಂತ್ರಿತ ಅಂಗಡಿಗಳು,ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಮಾಲ್‌ಗಳನ್ನು ಹೊರತುಪಡಿಸಿ ಮಧ್ಯಾಹ್ನ 1 ಗಂಟೆವರೆಗೆ ಎಲ್ಲಾ ಅಂಡಿ ತೆರೆಯಲು ಅನುವು ಮಾಡಿಕೊಡಲಾಗಿದೆ.

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top