Connect with us

Dvg Suddi-Kannada News

ದಾವಣಗೆರೆ: ಲಾಕ್‌ಡೌನ್ ನಿಯಮ ಉಲ್ಲಂಘನೆ; 67 ಪ್ರಕರಣ ದಾಖಲು, 4.63 ಲಕ್ಷ ಮೌಲ್ಯದ ಮದ್ಯ, ವಾಹನ ವಶ

ದಾವಣಗೆರೆ

ದಾವಣಗೆರೆ: ಲಾಕ್‌ಡೌನ್ ನಿಯಮ ಉಲ್ಲಂಘನೆ; 67 ಪ್ರಕರಣ ದಾಖಲು, 4.63 ಲಕ್ಷ ಮೌಲ್ಯದ ಮದ್ಯ, ವಾಹನ ವಶ

ದಾವಣಗೆರೆ: ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ನಿಯಮ ಉಲ್ಲಂಘನೆಯ 67 ಪ್ರಕರಣಗಳನ್ನು ದಾಖಲಿಸಿ, 4.63 ಲಕ್ಷ ರೂ. ಮೌಲ್ಯದ ಮದ್ಯ, ಬಿಯರ್ ಹಾಗೂ ವಾಹನ ವಶಕ್ಕೆ ಪಡೆಯಲಾಗಿದೆ.

ರಾಜ್ಯ ಸರ್ಕಾರ ಹಾಗೂ ಅಬಕಾರಿ ಆಯುಕ್ತರ ನಿರ್ದೇಶನದ ಮೆರೆಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲಾದ್ಯಂತ ಜೂ. 07 ರವರೆಗೆ ಎಲ್ಲ ಬಗೆಯ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ನಡುವೆ ಇತ್ತೀಚೆಗೆ ಮೇ.31 ಹಾಗೂ ಜೂನ್ 3 ರಂದು ಬೆಳಿಗ್ಗೆ 06 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅನುಮತಿಸಿದ ಅವಧಿ ಹೊರತುಪಡಿಸಿ, ಉಳಿದಂತ ಅವಧಿಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ಬಗೆಯ ಮದ್ಯದ ಮಾರಾಟವನ್ನು ನಿಷೇಧಿಸಿ, ನಿಷೇಧಿತ ಅವಧಿಯಲ್ಲಿ ಎಲ್ಲಾ ವಿಧದ ಮದ್ಯದ ಸನ್ನದುಗಳನ್ನು ಇಲಾಖೆಯಿಂದ ಸೀಲ್ ಮಾಡಿ ಬಂದ್ ಮಾಡಲಾಗಿರುತ್ತದೆ.

ಮದ್ಯ ಮಾರಾಟದ ನಿಷೇಧಿತ ಅವಧಿಯ ಜೊತೆಗೆ ಲಾಕ್‌ಡೌನ್ ಅವಧಿ ಏ.23 ರಿಂದ ಮೇ 31 ರವರೆಗಿನ ಅವಧಿಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ನಿಯಮ ಉಲ್ಲಂಘನೆಯನ್ನು ಪತ್ತೆಹಚ್ಚಲು ಜಿಲ್ಲೆಯಲ್ಲಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಿ ದಾವಣಗೆರೆ ಜಿಲ್ಲೆಯಾದ್ಯಂತ ದಾಳಿ ನಡೆಸಲಾಗಿತ್ತು. ಕಳೆದ ಏ.23 ರಿಂದ ಮೇ.31 ರವರೆಗೆ ಜಿಲ್ಲೆಯಲ್ಲಿ ಒಟ್ಟು 147 ದಾಳಿ ಸಂಘಟಿಸಿದ್ದ್ದು, 19 ಘೋರ ಹಾಗೂ 15(ಎ) ಅಡಿಯಲ್ಲಿ 48 ಸೇರಿದಂತೆ ಒಟ್ಟು 67 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೇ 385.930 ಲೀ ಮದ್ಯ, 113.930 ಲೀ ಬಿಯರ್, 4 ವಾಹನ ಸೇರಿದಂತೆ ಒಟ್ಟು 4,63,487 ರೂ. ಮೌಲ್ಯದ ಅಬಕಾರಿ ಪದಾರ್ಥ ಮತ್ತು ವಸ್ತುಗಳನ್ನು ಜಪ್ತು ಮಾಡಲಾಗಿದೆ.

ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಮದ್ಯದ ಅಲಭ್ಯತೆಯಿಂದಾಗಿ ಪಾನೀಕರು ತಮ್ಮ ವ್ಯಸನದ ಹಿನ್ನೆಲೆಯಲ್ಲಿ ಇತರೆ ಮಾದಕ ವಸ್ತುಗಳಾದ ನಕಲಿ ಮದ್ಯ, ಕಳ್ಳಭಟ್ಟಿ, ಸಾರಾಯಿ, ಸ್ಯಾನಿಟೈಸರ್, ವಾರ್ನಿಶ್, ಸರ್ಜಿಕಲ್ ಸ್ಪಿರಿಟ್ ಇತ್ಯಾದಿಗಳನ್ನು ಸೇವನೆ ಮಾಡಬಾರದು. ಇದರ ಸೇವನೆಯಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರೊಂದಿಗೆ ಪ್ರಾಣಹಾನಿಯಾಗುವ ಸಂಭವವಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top