ದಾವಣಗೆರೆ: ಮೀನುಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಯ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ಮೀನುಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನ ಫಲಾನುಭವಿ ಆಧಾರಿತ ಯೋಜನೆಗಳಿಗೆ ವೃತ್ತಿಪರ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಯಲ್ಲಿ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣೆ, ರಿವರ್‌ಗ್ಲಾಸ್‌ ಹರಿಗೋಲು ವಿತರಣೆ, ಮತ್ಸ್ಯಾ ವಾಹಿನಿ ಮತ್ತು ಮೀನು ಮಾರಾಟಕ್ಕೆ ಸಹಾಯ, ಮೀನು ಸಾಗಾಣಿಕೆ ವಾಹನ ಖರೀದಿಗೆ ಸಹಾಯ ಸೌಲಭ್ಯಗಳನ್ನು ನೀಡಲಾಗುವುದು. ಆಸಕ್ತಮತ್ತು ಅರ್ಹ ಮೀನುಗಾರರು ನ. 11 ರೊಳಗಾಗಿ ಆಯಾತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ಅರ್ಜಿಸಲ್ಲಿಸಬಹುದಾಗಿದೆಎಂದು ಜಿಲ್ಲಾಮೀನುಗಾರಿಕೆ ಉಪನಿರ್ದೇಶಕ ಡಿ.ಅಣ್ಣಪ್ಪಸ್ವಾಮಿ ತಿಳಿಸಿದ್ದಾರೆ.