ದಾವಣಗೆರೆ: ಶ್ರೀಗಂಧ ಮರ ಕಡಿದು ಅಕ್ರಮ ಸಾಗಾಟ; ಒಬ್ಬ ಆರೋಪಿ‌ ಬಂಧನ, ಇನ್ನಿಬ್ಬರು ಪರಾರಿ…!

ದಾವಣಗೆರೆ: ಅಕ್ರಮವಾಗಿ ಶ್ರೀಗಂಧ ಮರ ಕಡಿದು ಬೈಕ್‌ನಲ್ಲಿ ಸಾಗಾಟ ಮಾಡುತ್ತಿದ್ದ ಒಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಈ ಘಟನೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುದುರೆಕೊಂಡ ರಾಜ್ಯ ಅರಣ್ಯ ಪ್ರದೇಶ ಬಳಿ ನಡೆದಿದೆ. ತಾಲ್ಲೂಕಿನ ಚಿನ್ನಿಕಟ್ಟೆ ಗ್ರಾಮದ ತಮಿಳರ ಕಾಲೊನಿ ಶ್ರೀನಿವಾಸ ಬಂಧಿತನಾಗಿದ್ದು, ಧನ್‌ಪಾಲ್ ಮತ್ತು ಮುರುಗೇಶ ತಪ್ಪಿಸಿಕೊಂಡಿದ್ದಾರೆ‌. ಅರಣ್ಯ ಇಲಾಖೆಯವರು ಗಸ್ತಿನಲ್ಲಿದ್ದಾಗ ಎದುರುಗಡೆಯಿಂದ ಮೂವರು ಬೈಕ್‌ನಲ್ಲಿ ಬರುತ್ತಿದ್ದು, ಅರಣ್ಯ ಇಲಾಖೆ ವಾಹನವನ್ನು ಕಂಡು ಗಾಬರಿಗೊಂಡು ಬೈಕ್ ನಿಲ್ಲಿಸಿದಾಗ ಹಿಂಬದಿಯ ಇಬ್ಬರು ಓಡಿಹೋಗಿದ್ದು, ಬೈಕ್ … Continue reading ದಾವಣಗೆರೆ: ಶ್ರೀಗಂಧ ಮರ ಕಡಿದು ಅಕ್ರಮ ಸಾಗಾಟ; ಒಬ್ಬ ಆರೋಪಿ‌ ಬಂಧನ, ಇನ್ನಿಬ್ಬರು ಪರಾರಿ…!