ದಾವಣಗೆರೆ: ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಅಬ್ಬರ ಕಡಿಮೆಯಾಗಿದೆ. ಇದರಿಂದ ಭದ್ರಾ ಜಲಾಶಯ ( bhadra dam) ಒಳ ಹರಿವು ಸಹ ಕುಗ್ಗಿದ್ದು, ಇಂದು (ಜೂ.04) ಬೆಳಗ್ಗೆ ಹೊತ್ತಿಗೆ ಒಳ ಹರಿವು 3,090 ಸಾವಿರ ಕ್ಯೂಸೆಕ್ ನಷ್ಟಿದೆ. ಮೇ ತಿಂಗಳ ಕೊನೆ ವಾರ ಸತತ ಮಳೆಯಿಂದ ಒಳ ಹರಿವು ಏರಿಕೆಯಾಗಿತ್ತು. ಆದರೆ, ಕಳೆದ ಒಂದು ವಾರದಿಂದ ಮಳೆ ಪ್ರಮಾಣ ಇಳಿಕೆಯಾಗಿದೆ.
ಭದ್ರಾ ಜಲಾಶಯಶವು ಇಂದಿನ ( ಜೂ.4) ನೀರಿನಮಟ್ಟ 142.8 ಅಡಿ ಇದ್ದು, ಒಳ ಹರಿವು 3,090 ಕ್ಯೂಸೆಕ್ ಇದೆ. ಕಳೆದ ವರ್ಷ ಇದೆ ದಿನ 117.3 ಅಡಿ ಇತ್ತು. ಕಳೆದ ಎರಡ್ಮೂರು ದಿನ ಬಿಡುವು ನೀಡಿದ್ದ ಮಳೆ, ಈ ವಾರ ಮತ್ತೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ
- ದಿನಾಂಕ :04-06-2025
- ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 28,552 ಟಿಎಂಸಿ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಮಟ್ಟ: 142.8 ಅಡಿ
- ಒಳ ಹರಿವು : 3,090 ಕ್ಯೂಸೆಕ್
- ಹೊರ ಹರಿವು : 347 ಕ್ಯೂಸೆಕ್
- ಎಡ ದಂಡೆ : 80 ಕ್ಯೂಸೆಕ್
- ಬಲ ದಂಡೆ : 00 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 117.3 ಅಡಿ
- ಕಳೆದ ವರ್ಷದ ಇದೇ ದಿನ ಒಳಹರಿವು: 433 ಕ್ಯೂಸೆಕ್