Connect with us

Dvgsuddi Kannada | online news portal | Kannada news online

ಪಶು ವಲಯದಲ್ಲಿ ಹೊಸ ಉದ್ಯಮ ಶುರು ಮಾಡು ಪ್ಲ್ಯಾನ್ ಇದ್ಯಾ..? ಆತ್ಮನಿರ್ಭರ ಭಾರತ ಯೋಜನೆಯಡಿ ವಿವಿಧ ಉದ್ಯಮ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

ಪ್ರಮುಖ ಸುದ್ದಿ

ಪಶು ವಲಯದಲ್ಲಿ ಹೊಸ ಉದ್ಯಮ ಶುರು ಮಾಡು ಪ್ಲ್ಯಾನ್ ಇದ್ಯಾ..? ಆತ್ಮನಿರ್ಭರ ಭಾರತ ಯೋಜನೆಯಡಿ ವಿವಿಧ ಉದ್ಯಮ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ ಕಾರ್ಯಕ್ರಮದಡಿ ಪಶುಸಂಗೋಪನಾ ವಲಯದಲ್ಲಿ ಪಶುಪಾಲನಾ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ವಿವಿಧ ಉದ್ಯಮಗಳ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಲ್ಲಿ ವಿವಿಧ ವರ್ಗ/ಯೋಜನೆಗಳ ಮುಖಾಂತರ ಆರ್ಥಿಕ ಚಟುಚಟಿಕೆಗಳನ್ನು ವೃದ್ಧಿಸಿ ಅಸಂಘಟಿತ ವಲಯಗಳಿಗೆ ಮೂಲಭೂತ ಸೌಕರ್ಯ ನೀಡಿ ಸಂಘಟಿತ ವಲಯಕ್ಕೆ ತಂದು ಹೆಚ್ಚಿನ ಉದ್ಯೋಗ ಸೃಷ್ಟಿಸಿ ಉತ್ತಮ ಜೀವನ ನಿರ್ವಹಣೆ ಮಾಡುವ ಗುರಿ ಹೊಂದಿದ್ದು, ಮಾರ್ಗಸೂಚಿಗಳ ಪ್ರಕಾರ ಪಶುಸಂಗೋಪನಾ ವಲಯದ ಡೈರಿ ಮತ್ತು ಮೌಲ್ಯಾಧಾರಿತ ಡೈರಿ ಪದಾರ್ಥಗಳು, ಕುರಿ, ಮೇಕೆ, ಹಂದಿ, ಕೋಳಿ ಹಾಗೂ ಎಮ್ಮೆಯ ಮೌಲ್ಯಾಧಾರಿತ ಮಾಂಸದ ಪದಾರ್ಥಗಳು ತಯಾರಿಕಾ ಘಟಕಗಳು, ಪಶು ಆಹಾರ ಘಟಕಗಳು ಹಾಗೂ ಇದಕ್ಕೆ ಪ್ರಯೋಗಾಲಯಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತದೆ.

ಈ ಉದ್ಯಮಗಳಿಗೆ ವಿವಿಧ ವರ್ಗಗಳ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ (ಎಂಎಸ್‍ಎಂಇ) ಉದ್ಯಮಿಗಳಿಗೆ ಪ್ರೋತ್ಸಾಹ ಧನ ಹಾಗೂ ವಿಶೇಷ ರಿಯಾಯಿತಿ ಲಭ್ಯವಿರುತ್ತದೆ.

ದಾವಣಗೆರೆ ಜಿಲ್ಲೆಗೆ 30 ಗುರಿಗಳನ್ನು ಈ ಯೋಜನೆಯಡಿ ನಿಗದಿಪಡಿಸಲಾಗಿದ್ದು ಪಿಪಿಪಿ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲ್ಲಿ ಈ ಘಟಕಗಳ ಸ್ಥಾಪನೆ ಮತ್ತು ವಿಸ್ತರಣೆಗಳಿಗೆ ಅವಕಾಶವಿದ್ದು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯವಿರುತ್ತದೆ. ಅರ್ಜಿಗಳನ್ನು ಆನ್-ಲೈನ್‍ನಲ್ಲಿ ಬ್ಯಾಂಕುಗಳಿಗೆ ಸಲ್ಲಿಸಬೇಕಾಗಿರುತ್ತದೆ. ಅರ್ಜಿಗಳನ್ನು www.ahidf.udyamimitra.in ವೆಬ್‍ಸೈಟ್‍ನಲ್ಲಿ ಡೌನಲೋಡ್ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ) ಪಶು ಆಸ್ಪತ್ರೆ, ದಾವಣಗೆರೆ-ಮೊ.ಸಂ: 9448005250, ಚನ್ನಗಿರಿ -9449474523, ಹರಿಹರ -8073900950, ಹೊನ್ನಾಳಿ -9448170225, ನ್ಯಾಮತಿ -9448479156, ಜಗಳೂರು -9901641942 ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ, ದಾವಣಗೆರೆ – 7019394129 ಇವರನ್ನು ಸಂಪರ್ಕಿಸಬಹುದೆಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top