Connect with us

Dvgsuddi Kannada | online news portal | Kannada news online

ಕುಮಾರ ರಕ್ಷಾ ಆಂಬುಲೆನ್ಸ್ ಚಾಲನೆ

ಕುಮಾರ ರಕ್ಷಾ ಆ್ಯಂಬುಲೆನ್ಸ್ ಗೆ ಜೆಡಿಎಸ್ ವರಿಷ್ಟ ಎಚ್. ಡಿ.‌ ದೇವೇಗೌಡ ಚಾಲನೆ ನೀಡಿದರು.

ರಾಜ್ಯ ಸುದ್ದಿ

ಕುಮಾರ ರಕ್ಷಾ ಆಂಬುಲೆನ್ಸ್ ಚಾಲನೆ

ಬೆಂಗಳೂರು: ಪ್ರವಾಹದಿಂದ ಉತ್ತರ ಕರ್ನಾಟಕದಲ್ಲಿ ನಿಧಾನವಾಗಿ ಸಾಂಕ್ರಾಮಿಕ ರೋಗ ಉಲ್ಬಣಿಸುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಜೆಡಿಎಸ್ ಕುಮಾರ ರಕ್ಷಾ ಎಂಬ ಆಂಬ್ಯುಲೆನ್ಸ್ ಸೇವೆ ನೀಡಲಿದೆ.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆಂಬ್ಯುಲೆನ್ಸ್ ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಜೆಡಿಎಸ್ ನ ಉಪಾಧ್ಯಕ್ಷರಾದ ಡಾ. ಬಿ.ಎಂ. ಉಮೇಶ್ ಅವರು ಸ್ವಂತ ಖರ್ಚಿನಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದ್ದಾರೆ. ಇಂತಹ ಸೇವಾ ಕಾರ್ಯ ನಿರಂತರವಾಗಿ ನಡೆಸಿಕೊಂಡು ಬಂದವರು ಉನ್ನತ ಸ್ಥಾನಕ್ಕೇರಲಿದ್ದಾರೆ ಎಂದರು.

ಕುಮಾರ ರಕ್ಷಾ ವಾಹನದಲ್ಲಿ ನೆರೆಯಲ್ಲಿ ಕಂಗಾಲಾಗಿರುವ ಕುಟುಂಬಗಳಿಗೆ ಔಷಧಿ, ಅಗತ್ಯವಿರುವಂತಹ ಹೊದಿಗೆ, ಛತ್ರಿ, ಬ್ರೆಡ್ಡು, ಬಿಸ್ಕತ್ತು, ಊಟ, ತಿಂಡಿ, ಕುಡಿಯುವ ನೀರು, ಟಾರ್ಚು, ಚಪಾತಿ ಹಾಗೂ ಇನ್ನಿತರೆ ಅವಶ್ಯ ಸಾಮಗ್ರಿಗಳನ್ನು ಸಹ ಕಳುಹಿಸಿಕೊಡಲಾಗಿದೆ. ಈ ವಾಹನಗಳ ಜೊತೆ ಸುಮಾರು 15 ಕ್ಕೂ ಹೆಚ್ಚು ಸ್ವಯಂ ಪ್ರೇರಿತ ಕಾರ್ಯಕರ್ತರನ್ನು  ಕಳುಹಿಸಿಕೊಡಲಾಗಿದೆ.

ಉಪಾಧ್ಯಕ್ಷ ಉಮೇಶ್‌ಕುಮಾರ್ ಮಾತನಾಡಿ,  ನಾಡಿನ ಎಲ್ಲೆಡೆ ಸಂಚರಿಸಲಿರುವ ಈ ಉಚಿತ ಮೊಬೈಲ್ ಡಯಾಬಿಟಿಕ್ ರಕ್ತ ಪರೀಕ್ಷೆ, ಎಕ್ಸ್ ರೇ ಸೇರಿದಂತೆ ಹಲವು ಆರೋಗ್ಯ ಸೇವೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಬಡ ಜನರು ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುವಂತಹ ಮೊಬೈಲ್ ವಾಹನಗಳ ಸೇವೆಯನ್ನು ಆರಂಭಿಸಿದ್ದೇವೆ. ಈ ಆರೋಗ್ಯ ತಪಾಸಣಾ ವಾಹನಗಳು ಮೊದಲ ಹಂತದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಸೇವೆಯನ್ನು ವಿಸ್ತರಿಸುವ ಯೋಜನೆ ನಮ್ಮದಾಗಿದೆ ಎಂದ್ರು.

Continue Reading
Advertisement
You may also like...

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಜ್ಯ ಸುದ್ದಿ

To Top