Connect with us

Dvgsuddi Kannada | online news portal | Kannada news online

ಮೆಗಾ ಸ್ಟಾರ್ ಗಿಲ್ಲ ಕೊರೊನಾ.. ಕೋವಿಡ್-19 ಟೆಸ್ಟ್ ನಲ್ಲಿ ಆಗಿತ್ತು ಲೋಪ..!!

ಸಿನಿಮಾ

ಮೆಗಾ ಸ್ಟಾರ್ ಗಿಲ್ಲ ಕೊರೊನಾ.. ಕೋವಿಡ್-19 ಟೆಸ್ಟ್ ನಲ್ಲಿ ಆಗಿತ್ತು ಲೋಪ..!!

ಮೆಗಾ ಸ್ಟಾರ್‌ ಚಿರಂಜೀವಿ ಅವರಿಗೆ ಕೊರೊನಾ ವೈರಸ್‌ ತಗುಲಿಲ್ಲ ಎಂಬುದು ಈಗ ದೃಢಪಟ್ಟಿದೆ. ಅವರಿಗೆ ಮೂರು ಬಗೆಯ ಪರೀಕ್ಷೆ ಮಾಡಲಾಗಿದ್ದು, ಕೋವಿಡ್‌-19 ಇಲ್ಲ ಎಂಬುದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಚಿರಂಜೀವಿ ಅವರೇ ಸೋಶಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಸುದ್ದಿ ಕೇಳಿ ಮೆಗಾ ಫ್ಯಾನ್ಸ್‌ ನಿಟ್ಟುಸಿರು ಬಿಟ್ಟಿದ್ದಾರೆ.’ವೈದ್ಯರ ತಂಡ ಮೂರು ಬೇರೆ ಬೇರೆ ಟೆಸ್ಟ್‌ಗಳನ್ನು ಮಾಡಿದೆ. ಆ ಮೂಲಕ ನನಗೆ ಕೋವಿಡ್‌ ನೆಗೆಟಿವ್‌ ಎಂಬುದು ಗೊತ್ತಾಗಿದೆ. RT PCR kit ಲೋಪದಿಂದಾಗಿ ಮೊದಲಿನ ವರದಿ ತಪ್ಪಾಗಿತ್ತು. ಈ ಸಂದರ್ಭದಲ್ಲಿ ನನ್ನ ಬಗ್ಗೆ ಕಾಳಜಿ, ಪ್ರೀತಿ ತೋರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಚಿರು ಟ್ವೀಟ್‌ ಮಾಡಿದ್ದಾರೆ. ಅದರ ಜೊತೆಗೆ ಕೊರೊನಾ ಪರೀಕ್ಷೆ ವರದಿಯನ್ನೂ ಶೇರ್‌ ಮಾಡಿಕೊಂಡಿದ್ದಾರೆ.ಚಿರುಗೆ ಕೊರೊನಾ ವೈರಸ್‌ ತಗುಲಿದೆ ಎಂಬುದು ತಿಳಿಯುತ್ತಿದ್ದಂತೆಯೇ ‘ಆಚಾರ್ಯ’ ಸಿನಿಮಾದ ಶೂಟಿಂಗ್‌ ಮುಂದೂಡಲಾಯಿತು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಸಿನಿಮಾ

To Top